ರಾಜ್ಯನ್ಯಾಯಾಲಯದಲ್ಲಿ ದುರಹಂಕಾರದ ವರ್ತನೆ: ಕ್ಷಮೆಯಾಚನೆ ನಂತರ ವಕೀಲರನ್ನು ಬಿಡುಗಡೆ ಮಾಡಿದ ಕರ್ನಾಟಕ ಹೈಕೋರ್ಟ್
ಕ್ಷಮೆ ಯಾಚಿಸುತ್ತಿದ್ದಂತೆ ಹಾಲಿ ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ ಪ್ರಕರಣದಲ್ಲಿ ಫೆಬ್ರುವರಿ 2ರಂದು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಗರದ ವಕೀಲ ಕೆ.ಎಸ್. ಅನಿಲ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ.