ದೇಶಬಂಕಿಮಚಂದ್ರರ 'ವಂದೇ ಮಾತರಂ'ಗೂ ರಾಷ್ಟ್ರಗೀತೆ ಸಮಾನ ಸ್ಥಾನಮಾನ ಸಿಗಲಿ: ದೆಹಲಿ 'ಹೈ'ಗೆ ಮನವಿ
ರಾಷ್ಟ್ರಗೀತೆ "ಜನಗಣಮನ" ಹಾಗೂ ರಾಷ್ಟ್ರೀಯ ಹಾಡು, ಬಂಕಿಮಚಂದ್ರ ಚಟರ್ಜಿ ವಿರಚಿತ "ವಂದೇ ಮಾತರಂ" ಗಳಿಗೆ ಸಮಾನ ಸ್ಥಾನಮಾನ ಕಲ್ಪಿಸುವಂತೆ ನೀತಿ ನಿರೂಪಣೆ ಮಾಡಬೇಕೆಂದು ಕೇಂದ್ರಕ್ಕೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಸೋಮವಾರ ಮನವಿ ಸಲ್ಲಿಕೆಯಾಗಿದೆ.