ವಂದೇ ಮಾತರಂ ಮಸೂದೆ

ಕವಿತೆಯಿಂದ ರಾಷ್ಟ್ರೀಯ ಗೀತೆಯಾಗುವವರೆಗೆ: ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಕೋಟ್ಯಂತರ ಭಾರತೀಯರ ಭಾವನಾತ್ಮಕ ಶಕ್ತಿ. ಒಂದು ಕವಿತೆಯಾಗಿ ಹುಟ್ಟಿ, ದೇಶದ ರಾಷ್ಟ್ರೀಯ ಗೀತೆಯಾಗಿ ಬೆಳೆದುಬಂದ ಈ ಅಪರೂಪದ ಗೀತೆಯ ಕಾಲಗಣನೆ ಮತ್ತು ಇತ್ತೀಚಿನ ಕಾನೂನು ಬದಲಾವಣೆಗಳ ವಿವರ ಇಲ್ಲಿದೆ.

'ವಂದೇ ಮಾತರಂ' ಅವಮಾನಿಸಿದರೆ 3 ವರ್ಷ ಜೈಲು ಶಿಕ್ಷೆ: ವಿಪಕ್ಷಗಳ ಪ್ರತಿಭಟನೆ ನಡುವೆ ರಾಜ್ಯಸಭೆಯಲ್ಲಿ ಮಸೂದೆ ಮಂಡನೆ!
ಸಂಸತ್ ಮುಂಗಾರು ಅಧಿವೇಶನದಲ್ಲಿ ಇಂದು ಕೇಂದ್ರ ಸರ್ಕಾರವು ರಾಷ್ಟ್ರೀಯ ಗೀತೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026 ಅನ್ನು ಮಂಡಿಸಿದ್ದು ರಾಜ್ಯಸಭೆಯಲ್ಲಿ ವಾತಾವರಣ ಬಿಸಿಯಾಯಿತು.

