ಕ್ರಿಕೆಟ್ಭಾರತವನ್ನು ತವರಿನಲ್ಲೇ ಸೋಲಿಸುವುದು ಅಂತಿಮ ಗುರಿ: ಆಸ್ಟ್ರೇಲಿಯಾ ಮುಖ್ಯ ಕೋಚ್ ಲ್ಯಾಂಗರ್
ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ತಲುಪಿರುವುದಕ್ಕೆ ಆಸ್ಟ್ರೇಲಿಯಾದ ಆಟಗಾರರಲ್ಲಿ ಮಂದಹಾಸ ಮೂಡಿದೆ. ಆದರೆ, ಭಾರತವನ್ನು ಅದರ ತವರಿನಲ್ಲೇ ಸೋಲಿಸುವುದು ಅಂತಿಮ ಪರೀಕ್ಷೆಯಾಗಿ ಉಳಿದಿದೆ ಎಂದು ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.