ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು; 100 ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ- ಕಾಂಗ್ರೆಸ್
ಈ ನಿರ್ಣಯಕ್ಕೆ ಸಮಾಜವಾದಿ ಪಕ್ಷ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬೆಂಬಲವಿದೆ. ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಔಪಚಾರಿಕವಾಗಿ ತನ್ನ ನಿಲುವನ್ನು ಘೋಷಿಸಿಲ್ಲ. ಟಿಎಂಸಿ ನಾಯಕರು ಸಭೆಯಲ್ಲಿ ಭಾಗವಹಿಸಲಿಲ್ಲ.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ: ಕಾಂಗ್ರೆಸ್ ನಿಂದ ಬಹಿಷ್ಕಾರ
ಲೋಕಸಭಾ ಸ್ಪೀಕರ್ ಓಂ. ಬಿರ್ಲಾ ಶುಕ್ರವಾರ ಅಪರಾಹ್ನ 2.30ಕ್ಕೆ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದರೆ ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದರಲ್ಲಿ ನಾವು ಭಾಗವಹಿಸುವುದಿಲ್ಲ, ಬಹಿಷ್ಕರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

2022ರಲ್ಲಿ ನೂತನ ಕಟ್ಟಡದಲ್ಲಿ ಸಂಸತ್ ಅಧಿವೇಶನ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ
2022 ರಲ್ಲಿ ದೇಶದ 75 ನೇ`ಸ್ವಾತಂತ್ರೋತ್ಸವ ವರ್ಷವನ್ನಾಚರಿಸಲಿದೆ. ಆ ಸಮಯದಲ್ಲಿ ಅಂದಿನ ಸಾಂಸತ್ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

