ದೇಶಪುದುಚೆರಿ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆ: ಆರೋಗ್ಯ ಸಚಿವ ಮತ್ತು 3 ಶಾಸಕರಿಂದ ಲೆ.ಗವರ್ನರ್ ಭಾಷಣ ಬಹಿಷ್ಕಾರ!
ಇಲ್ಲಿನ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ಸಂಘರ್ಷ ಮಿತಿ ಮೀರಿ ಹೋಗಿದೆ. ಇಂದು ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣವನ್ನು ಬಹಿಷ್ಕರಿಸಿ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣ ರಾವ್, ಸಂಸದೀಯ ಕಾರ್ಯದರ್ಶಿ ಕೆ ಲಕ್ಷ್ಮೀನಾರಾಯಣ, ಸರ್ಕಾರದ ಸಚೇತಕ ಆರ್ ಕೆಆರ್ ಅನಂತರಾಮನ್ ಮತ್ತು ಶಾಸಕ ಟಿ ಜಯಮೂರ್ತಿ ಅವರು ಹೊರನಡೆದ ಪ್ರಸಂಗ