ದೇಶಲಾಲೂ ಕುಟುಂಬದ ಮೇಲೆ ಇಡಿ ದಾಳಿ: 1 ಕೋಟಿ ರೂ. ನಗದು ವಶ, 600 ಕೋಟಿ ರೂ. ಮೊತ್ತದ ಲೆಕ್ಕವಿಲ್ಲದ ಆದಾಯ ಪತ್ತೆ!
ಉದ್ಯೋಗಕ್ಕಾಗಿ ಭೂ ಹಗರಣ ಸಂಬಂಧ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ 1 ಕೋಟಿ ರೂ. ನಗದು ಮತ್ತು 1900 ಅಮೆರಿಕನ್ ಡಾಲರ್ ವಿದೇಶಿ ಕರೆನ್ಸಿ, 1.5 ಕೆಜಿಗೂ ಹೆಚ್ಚಿನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ಹೇಳಿದೆ.