ಲಾಲ್ ಸಿಂಗ್ ಚಡ್ಡಾ

ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಬಹಿಷ್ಕರಿಸಿ ರಾಷ್ಟ್ರೀಯವಾದಿಗಳಿಂದ ಅಭಿಯಾನ!
ಅಸಹಿಷ್ಣುತೆ ಹೇಳಿಕೆ ಸೇರಿದಂತೆ ಹಲವು ತಮ್ಮ ಹಿಂದಿನ ಹೇಳಿಕೆಗಳು ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಗೆ ಸಂಕಷ್ಟ ತಂದಿಟ್ಟಿದೆ. ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ರಾಷ್ಟ್ರೀಯವಾದಿಗಳಿಂದ ಅಭಿಮಾನ ಮತ್ತಷ್ಟು ತೀವ್ರಗೊಂಡಿದೆ.

ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್!
ಹಬ್ಬಗಳು, ಸಾಲು ಸಾಲು ರಜೆಗಳ ಹೊರತಾಗಿಯೂ ಬಾಲಿವುಡ್ ನ ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್ ಚಿತ್ರಗಳು ಬಾಕ್ಸ್ ಆಫೀಸ್ ನಿರೀಕ್ಷೆ ಹುಸಿಗೊಳಿಸಿದ್ದು, ಮಕಾಡೆ ಮಲಗಿವೆ. ಬಾಲಿವುಡ್ ಬಾಕ್ಸ್ ಆಫೀಸ್ ಗೆ ಇದು ನಿಜಕ್ಕೂ ಆಘಾತದ ಸುದ್ದಿಯಾಗಿದೆ.

ಬಾಲಿವುಡ್ ಗಡಗಡ: ಅಮೀರ್ ಚಿತ್ರದಿಂದಲೂ ಮೇಲೇಳಲಿಲ್ಲ; 3ನೇ ದಿನಕ್ಕೆ ಲಾಲ್ ಸಿಂಗ್ ಚಡ್ಡಾ ಕಲೆಕ್ಷನ್ ಎಷ್ಟು?
ದಕ್ಷಿಣ ಭಾರತದ ಚಿತ್ರಗಳ ಮುಂದೆ ಸೊರಗಿದ್ದ ಬಾಲಿವುಡ್ ಚಿತ್ರರಂಗವನ್ನು ಖಾನ್ ತ್ರಯರಲ್ಲಿ ಒಬ್ಬರಾದ ಬಾಲಿವುಡ್ ನಟ ಅಮೀರ್ ಖಾನ್ ರಿಂದಲೂ ಮೇಲೆತ್ತಲು ಸಾಧ್ಯವಾಗಲಿಲ್ಲ. ಬರೋಬ್ಬರಿ 200 ಕೋಟಿ ಬಜೆಟ್ ನ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ಮೂರನೇ ದಿನವೂ ಗಳಿಕೆಯಲ್ಲಿ ತಿಣುಕಾಡುತ್ತಿದೆ.

ಹೈದ್ರಾಬಾದ್: ರಾಜ ಮೌಳಿ, ನಾಗಾರ್ಜುನ, ಚಿರಂಜೀವಿಗಾಗಿ 'ಲಾಲ್ ಸಿಂಗ್ ಚಡ್ಡಾ' ವಿಶೇಷ ಪ್ರದರ್ಶನ
ಬಹುನಿರೀಕ್ಷಿತ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಯನ್ನು ಎದುರು ನೋಡುತ್ತಿರುವ ಬಾಲಿವುಡ್ ನಟ ಆಮಿರ್ ಖಾನ್, ಇತ್ತೀಚಿಗೆ ಟಾಲಿವುಡ್ ನ ಕೆಲವು ಸೆಲೆಬ್ರಿಟಿಗಳಿಗೆ ತಮ್ಮ ಹೊಸ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಚಿತ್ರದ ಟ್ರೈಲರ್
ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ.

