ದೇಶಕೇಂದ್ರದೊಂದಿಗೆ ಮಾತುಕತೆ ಬಳಿಕ ಪ್ರತಿಭಟನೆಯ ಎಚ್ಚರಿಕೆ ನೀಡಿದ ಲಡಾಖ್ ಪಕ್ಷಗಳು
ಮುಂದಿನ ಸಭೆಯಲ್ಲಿ ತಮ್ಮ ಎರಡು ಬೇಡಿಕೆಗಳಾದ ರಾಜ್ಯ ಸ್ಥಾನಮಾನ ಮತ್ತು ಲಡಾಖ್ ಗೆ 6ನೇ ಶೆಡ್ಯೂಲ್ ಸ್ಥಾನಮಾನ ನೀಡದಿದ್ದಲ್ಲಿ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಇತ್ತೀಚಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಹಾಗೂ ಲಡಾಖ್ ಪಕ್ಷಗಳ ಪ್ರತಿನಿಧಿಗಳ ನಡುವೆ ನಡೆದ ಸಭೆಯ ನಂತರ ಎಲ್ ಎಬಿ ( ಲೇಹ್ ಅಪೆಕ್ಸ್ ಬಾಡಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ನಾಯಕರು ಎಚ್ಚರಿಕೆ ನೀಡಿದ್ದಾರೆ.