ದೇಶಲಡಾಕ್ ನ ಪ್ರತಿ ಇಂಚು ಭೂಮಿ ಬಗ್ಗೆಯೂ ಎಚ್ಚರವಾಗಿದ್ದೇವೆ, ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ: ಅಮಿತ್ ಶಾ
ಲಡಾಕ್ ನಲ್ಲಿ ಚೀನಾದೊಂದಿಗೆ ಕಳೆದ ಐದೂವರೆ ತಿಂಗಳಿನಿಂದ ಸತತ ಸೇನೆಯ ಸಂಘರ್ಷದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರತಿ ಇಂಚು ಭೂಮಿ ಬಗ್ಗೆ ಕಾಳಜಿ ಹೊಂದಿದ್ದು ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.