ಲಖೀಂಪುರ್ ಹಿಂಸಾಚಾರ

ಲಖೀಂಪುರ್ ಹಿಂಸಾಚಾರ: ಮನವಿ ಸಲ್ಲಿಸಲು ರಾಷ್ಟ್ರಪತಿಗಳ ಅಪಾಯಿಂಟ್ಮೆಂಟ್ ಕೋರಿದ ಕಾಂಗ್ರೆಸ್
ಅಕ್ಟೋಬರ್ 3 ರಂದು ಸಂಭವಿಸಿದ ಲಖೀಂಪುರ್ ಖೇರಿ ಹಿಂಸಾಚಾರ ಸಂಗತಿಯ ಬಗ್ಗೆ ಸಮಗ್ರ ಮನವಿಯೊಂದನ್ನು ರಾಹುಲ್ ಗಾಂಧಿ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಅಪಾಯಿಂಟ್ಮೆಂಟ್ ನ್ನು ಕೋರಿದೆ.

ಲಖೀಂಪುರ್ ಹಿಂಸಾಚಾರ: ಈವರೆಗೂ ಕೇಂದ್ರ ಸಚಿವರ ಪುತ್ರನ ವಿರುದ್ಧ ಕ್ರಮ ಏಕಿಲ್ಲ? ಪ್ರತಿಪಕ್ಷಗಳ ಪ್ರಶ್ನೆ
ಲಖೀಂಪುರ್ ಖೇರ್ ನಲ್ಲಿ ಹಿಂಸಾಚಾರ ಸಂಭವಿಸಿ 72 ಗಂಟೆ ಕಳೆದರೂ ಈವರೆಗೂ ಯಾವೊಬ್ಬ ವ್ಯಕ್ತಿಯನ್ನು ಬಂಧಿಸಿಲ್ಲ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಹತ್ಯೆ ಆರೋಪ ಹಾಗೂ ಎಫ್ ಐಆರ್ ನಲ್ಲಿ ಹೆಸರಿದ್ದರೂ ಆತನನ್ನು ಈವರೆಗೂ ಏಕೆ ಬಂಧಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

