ರಾಜ್ಯಲಕ್ಷ್ಮಿ ಹೆಬ್ಬಾಳ್ಕರ್ ಬಳಿಕ ಮತ್ತೊಬ್ಬ ಕೈ ನಾಯಕನಿಗೆ ಇಡಿ ಗಾಳ! ಕೆ.ಎಸ್.ರಾಜಣ್ಣಗೆ ಸಮನ್ಸ್ ಜಾರಿ
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಳಿಕ ಇದೀಗ ಮತ್ತೊಬ್ಬ ಕೈ ನಾಯಕನಿಗೆ ಇಡಿ ಕಂಟಕ ಎದುರಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಕಾಂಗ್ರೆಸ್ ಶಾಸಕ ಕೆ.ಎಸ್. ರಾಜಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.