ರಾಜ್ಯಬಿಜೆಪಿಗರೇ ನನ್ನನೂ ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಿ: ರೌಡಿಶೀಟರ್ ಪಾನಿಪುರಿ ಮಂಜ
ರೌಡಿ ಶೀಟರ್ಗಳಾದ ಫೈಟರ್ ರವಿ, ಸೈಲೆಂಟ್ ಸುನೀಲ್ ಮತ್ತು ಬೆತ್ತನಗೆರೆ ಶಂಕರ ಬಿಜೆಪಿಗೆ ಸೇರ್ಪಡೆಗೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿರುವ ಬೆನ್ನಲ್ಲೇ ಮೈಸೂರಿನ ರೌಡಿ ಶೀಟರ್ವೊಬ್ಬರು ತನ್ನನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಬಿಜೆಪಿ ನಾಯಕರನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.