ರಾಜ್ಯಪೊಲೀಸ್ ಪೇದೆಗಳ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ: ರೌಡಿ ಗೊಣ್ಣೆ ವಿಜಿ ಬಂಧನಕ್ಕೆ ತೀವ್ರ ಶೋಧ
ಬೆನ್ನಟ್ಟಿ ಹಿಡಿಯಲು ಬಂದ ಮಹಿಳಾ ಪೇದೆ ಸೇರಿ ಮೂವರು ಪೊಲೀಸ್ ಪೇದೆಗಳ ಮೇಲೆ ಕಾರದ ಪುಡಿ ಎರಚಿ ಡ್ರ್ಯಾಗರ್ ನಿಂದ ಹಲ್ಲೆಗೈದು ಪರಾರಿಯಾಗಿರುವ ಕುಖ್ಯಾತ ರೌಡಿ ವಿಜಯ್ ಆಲಿಯಾಸ್ ಗೊಣ್ಣೆ ವಿಜಿ ಬಂಧನಕ್ಕೆ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ನಡೆಸಲಾಗಿದೆ.