ದೇಶಅಸ್ಸಾಂ: ಕೋವಿಡ್ ರೋಗಿ ಸತ್ತ ಬಳಿಕ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ, 24 ಮಂದಿ ಬಂಧನ
ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಅಲ್ಲಲ್ಲಿ ವೈದ್ಯರ, ದಾದಿಯರ ಮೇಲೆ ಹಲ್ಲೆ ನಡೆದ ಘಟನೆಗಳು ನಡೆದಿವೆ. ಅಸ್ಸಾಂ ರಾಜ್ಯದ ಹೊಜೈ ಜಿಲ್ಲೆಯ ಆಸ್ಪತ್ರೆಯಲ್ಲಿ ಕೂಡ ಮತ್ತೊಂದು ಘಟನೆ ನಡೆದಿದ್ದು, ಜನರ ಗುಂಪೊಂದು ಕೋವಿಡ್ ರೋಗಿ ನಿನ್ನೆ ತೀರಿಹೋದ ನಂತರ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.