ವಾಣಿಜ್ಯಜುಲೈನಲ್ಲಿ ರಾಜ್ಯದ ಜಿಎಸ್ಟಿ ಸಂಗ್ರಹ 9,795 ಕೋಟಿ ರೂ., ಕರ್ನಾಟಕಕ್ಕೆ ಎರಡನೇ ಸ್ಥಾನ
ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ ₹ 9,795 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇತರ ದೊಡ್ಡ ರಾಜ್ಯಗಳಾದ ಗುಜರಾತ್, ತಮಿಳುನಾಡು ಮತ್ತು ಅವಿಭಜಿತ ಆಂಧ್ರಪ್ರದೇಶಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಏರಿಕೆಯಾದ ಅತ್ಯಧಿಕ ಜಿಎಸ್ಟಿ ಸಂಗ್ರಹ ಇದಾಗಿದೆ. ಅತ್ಯಧಿಕ ತೆರಿಗೆ ಸಂಗ್ರಹದಲ್ಲಿ ರಾಜ್ಯವೂ ಎರಡನೇ ಸ್ಥಾನದಲ್ಲಿದೆ.