ರಾಜ್ಯಗದಗದಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಾಸನ ಪತ್ತೆ: 'ಕೀಲುಗುಂಟೆ' ಸಂಪ್ರದಾಯದ ರೋಚಕ ಮಾಹಿತಿ ಬಯಲು!
ರಾಷ್ಟ್ರಕೂಟರ ಆಡಳಿತದ ಅವಧಿಯಲ್ಲಿ ಇಂದಿನ ಲಕ್ಷ್ಮೇಶ್ವರ ಭಾಗದ ಪುಲಿಗೆರೆ ಪ್ರದೇಶವನ್ನು ಕುಪ್ಪೆ ಅರಸ ಎಂಬ ರಾಜನು ಆಳುತ್ತಿದ್ದನು. ಅನಾರೋಗ್ಯದಿಂದ ರಾಜ ನಿಧನವಾದ ಬಳಿಕ, ಅವನ ಆಪ್ತ ಸೇವಕ ತನ್ನ ಅರಸನ ಮೇಲಿನ ಭಕ್ತಿ ಮತ್ತು ನಿಷ್ಠೆಯ ಸಂಕೇತವಾಗಿ ಆತ್ಮತ್ಯಾಗ ಮಾಡಲು ನಿರ್ಧರಿಸಿದ್ದನು.