ರಾಜ್ಯರಾಯಚೂರು: ದೇವದಾಸಿ ಮಾಡುವುದಾಗಿ ಪೋಷಕರ ಬೆದರಿಕೆಗೆ ಅಂಜಿ ಮನೆ ಬಿಟ್ಟು ಹೋದ ಯುವತಿ!
ರಾಜ್ಯ ಸರ್ಕಾರವು ದೇವದಾಸಿ ಪದ್ದತಿಯನ್ನು ನಿಷೇಧಿಸಿದೆ, ನಿರ್ಮೂಲನ ಮಾಡಲಾಗಿದೆ ಎಂದು ಹೇಳಿಕೊಂಡರೂ, ಅದು ಈಗಲೂ ಅಲ್ಲಲ್ಲಿ ನಡೆಯುತ್ತಲೇ ಇದೆ. ತನ್ನ ಸಹೋದರಿಯ ಗಂಡನನ್ನು ಮದುವೆಯಾಗಲು ನಿರಾಕರಿಸಿದರೆ ‘ದೇವದಾಸಿ’ಯನ್ನಾಗಿ ಮಾಡಿ ದೇವಾಲಯಕ್ಕೆ ಬಿಡುವುದಾಗಿ ಪೋಷಕರು ಬೆದರಿಕೆ ಹಾಕಿದ್ದರಿಂದ 20 ವರ್ಷದ ಯುವತಿ ಮನೆ ಬಿಟ್ಟು ಓಡಿಹೋಗಿದ್ದಾಳೆ.