ರಾಮ ಮಂದಿರ ಉದ್ಘಾಟನೆ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ವೈಭವ ಕಣ್ತುಂಬಿಕೊಳ್ಳಿ- PHOTOS
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದು, ಈ ಐತಿಹಾಸಿ ಕ್ಷಣಕ್ಕೆ 7 ಸಾವಿರಕ್ಕೂ ಹೆಚ್ಚು ಗಣ್ಯರು ಸಾಕ್ಷಿಯಾದರು.

ರಾಮ ಮಂದಿರ ಉದ್ಘಾಟನೆ: ನಾಳೆ ಸರ್ಕಾರಿ ರಜೆ ಕೊಡೊಲ್ಲ- ಸಿಎಂ ಸಿದ್ದರಾಮಯ್ಯ
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆ ಅಂದರೆ ಜನವರಿ 22ರಂದು ನಡೆಯಲಿದ್ದು ಆದರೆ ನಾಳೆ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

''ಇತರರು ಏನೇ ಮಾಡಿದರೂ ಡೋಂಟ್ ಕೇರ್, ರಾಮ ಮಂದಿರ ಉದ್ಘಾಟನೆಗೆ ಹೋಗೆ ಹೋಗುತ್ತೇನೆ- ಹರ್ಭಜನ್ ಸಿಂಗ್
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ (ರಾಮನ ವಿಗ್ರಹ) 'ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಗೈರಾಗಲು ಬಹುತೇಕ ವಿಪಕ್ಷಗಳು ನಿಲುವು ತಾಳಿದರೂ ತಾವು ಪಾಲ್ಗೊಳ್ಳುವುದಾಗಿ ಮಾಜಿ ಕ್ರಿಕೆಟಿಗ ಮತ್ತು ಎಎಪಿ ಸಂಸದ ಹರ್ಭಜನ್ ಸಿಂಗ್ ಶನಿವಾರ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆ: ಜನವರಿ 22ರಂದು ಉತ್ತರ ಪ್ರದೇಶದಲ್ಲಿ ಮಾಂಸ, ಮೀನು ಮಾರಾಟಕ್ಕೆ ನಿಷೇಧ!
ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಈಗಾಗಲೇ ಜನವರಿ 22ರಂದು ಮದ್ಯ ಮಾರಾಟವನ್ನು ನಿಷೇಧಿಸಿದ್ದು ಇದೀಗ ರಾಮಮಂದಿರ ಉದ್ಘಾಟನೆ ದಿನವಾದ ಜನವರಿ 22ರಂದು ರಾಜ್ಯದಲ್ಲಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಗುರುವಾರ ಘೋಷಿಸಿದೆ.

ರಾಮ ಮಂದಿರ: ಪ್ರಾಣ ಪ್ರತಿಷ್ಠಾಪನೆ ಸಮಾರಂಭದಿಂದ ರೂ. 1 ಲಕ್ಷ ಕೋಟಿ ರೂ. ವ್ಯವಹಾರದ ನಿರೀಕ್ಷೆ!
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ 1 ಲಕ್ಷ ಕೋಟಿ ರೂಪಾಯಿ ಮೊತ್ತದ ವ್ಯವಹಾರವನ್ನು ನಿರೀಕ್ಷಿಸಲಾಗಿದೆ ಎಂದು ವ್ಯಾಪಾರಿಗಳ ಸಂಸ್ಥೆ CAIT ಸೋಮವಾರ ತಿಳಿಸಿದೆ.

ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ: ಇಂದಿನಿಂದ 11 ದಿನಗಳ ಕಾಲ ಪ್ರಧಾನಿ ಮೋದಿ ಉಪವಾಸ
ಜ.22 ರಂದು ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇಂದಿನಿಂದ (ಜ.12 ರಿಂದ) ಪ್ರಧಾನಿ ಮೋದಿ ಉಪವಾಸ ವ್ರತ ಕೈಗೊಂಡಿದ್ದಾರೆ.

ಅಯೋಧ್ಯೆ ರಾಮ ದೇವಾಲಯದ ಪ್ರಾಣಪ್ರತಿಷ್ಠಾಪನೆಗೆ ಕಾಂಗ್ರೆಸ್ ಗೈರು ಅಚ್ಚರಿಯೇನಲ್ಲ: ವಿಜಯೇಂದ್ರ
ಅಯೋಧ್ಯೆಯಲ್ಲಿ ರಾಮ ದೇವಾಲಯದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು ಹಾಜರಾಗುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ: ಧಾರವಾಡ ರೈತರಿಂದ 110 ಇಂಚು ಉದ್ದದ ಎರಡು ಕಂಬಳಿಗಳ ಕಾಣಿಕೆ!
ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ಸಮೀಪಿಸುತ್ತಿರುವಂತೆಯೇ ಭಕ್ತರು ಹೊಸ ದೇಗುಲಕ್ಕೆ ಕಾಣಿಕೆಗಳನ್ನು ನೀಡಲು ಮುಂದಾಗಿದ್ದಾರೆ.

ಬರ ಪರಿಹಾರ ವಿತರಣೆ ಆರಂಭ, ತಪ್ಪು ಮಾಡಿದ ಹಿಂದೂ ಕಾರ್ಯಕರ್ತನಿಗೆ ಶಿಕ್ಷೆ, ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಇದ್ದವರು ಹೋಗಲಿ: ಸಿಎಂ
1992ರ ಕರಸೇವೆ ಗಲಭೆ ಪ್ರಕರಣವೊಂದರಲ್ಲಿ ಪಾಲ್ಗೊಂಡ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿಯನ್ನು ಬಂಧಿಸಿರುವ ಬಗ್ಗೆ ಕೊಪ್ಪಳದಲ್ಲಿ ಇಂದು ಮಂಗಳವಾರ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

