ರಾಜ್ಯಪಾಲರು

'ಮೊದಲು ಶಾಸಕರ ಬೆಂಬಲ ಪಡೆಯಿರಿ, ಬಳಿಕ ರಾಜ್ಯಪಾಲರನ್ನು ಸಂಪರ್ಕಿಸಿ': ವಿಜಯ್ ವಿರುದ್ಧ ಡಿಎಂಕೆ ವಾಗ್ದಾಳಿ!
ಮೊದಲು ರಾಜಕೀಯ ಪಕ್ಷಗಳಿಂದ ಬೆಂಬಲ ಸಂಗ್ರಹಿಸಿ ನಂತರ ರಾಜ್ಯಪಾಲರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.

SSLC ತೃತೀಯ ಭಾಷೆಗೆ ಗ್ರೇಡಿಂಗ್: ನಿರ್ಧಾರ ಪರಿಶೀಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲ ಪತ್ರ!
SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳನ್ನು ನೀಡದೆ ಕೇವಲ ಗ್ರೇಡ್ ನೀಡುವ ನಿರ್ಧಾರವನ್ನು ಮರುಪರಿಶೀಲಿಸಿ. ಭಾಷಾವೈವಿಧ್ಯತೆ, ಜಾಗೃತಿ, ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ತೃತೀಯ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ.

ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ: ದೇಶದ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರ ಬದಲಾವಣೆ!
ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಸರ್ಕಾರ ಒಂಬತ್ತು ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ನೇಮಿಸಿದೆ.

ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಪರಮೇಶ್ವರ ಗಂಭೀರ ಆರೋಪ
ಕೆಲವು ಭಾಗಗಳಲ್ಲಿ, ಕೆಲವರು ಭಾಷಣಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ ಮೇಲೆ ಏನಾಯಿತು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಬಿಲ್ ತಂದಿದ್ದೇವೆ. ಯಾರು ಏನು ಬೇಕಾದರೂ ಮಾತಾಡಬಹುದೇ?

ರಾಜ್ಯಪಾಲ ಹುದ್ದೆ: ಮತ್ತೆ ಹುಟ್ಟು ಹಾಕಿದ ಚರ್ಚೆ (ನೇರ ನೋಟ)
ಮುತ್ಸದ್ದಿ ನಾಯಕರು, ಸಂವಿಧಾನ ತಜ್ಞರು ಅನೇಕ ವರ್ಷಗಳಿಂದ ಚರ್ಚಿಸುತ್ತಿರುವ ಈ ವಿಷಯ ಕೆಲವು ವರ್ಷಗಳಿಂದ ಮತ್ತೆ ಮುನ್ನೆಲೆಗೆ ಬಂದಿದೆ.

'ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ; ಗವರ್ನರ್ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೋ, ಜಗನ್ನಾಥ ಭವನದಲ್ಲಿದೆಯೋ?'
ಸಂಸತ್ತಿನಲ್ಲಿ “ವಂದೇ ಮಾತರಂ” ಬಗ್ಗೆ ಮೂರು ದಿನಗಳ ಕಾಲ ಚರ್ಚೆ ನಡೆಸುವ ಬಿಜೆಪಿಗೆ “ಜನ ಗಣ ಮನ”ದ ಬಗ್ಗೆ ಮೂರು ನಿಮಿಷವೂ ಚರ್ಚಿಸದಷ್ಟು ಅಸಹನೆ ಏಕೆ? ರಾಷ್ಟ್ರಗೀತೆಯನ್ನು ವಿರೋಧಿಸುವ ಸಂಘದ ಪಾಠವನ್ನು ಪಾಲಿಸುತ್ತಿದ್ದಾರೆಯೇ?

'ಬಿಜೆಪಿ ಶಾಸಕರು ನನ್ನ ಬಟ್ಟೆ ಹರಿದಿದ್ದಾರೆ; ರಣಹೇಡಿಗಳು, ಬ್ರಿಟೀಷರ ಬೂಟ್ ನೆಕ್ಕಿದವರು ರಾಜ್ಯದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ'
ಸಂವಿಧಾನದಲ್ಲಿ ರಾಜ್ಯಪಾಲರ ಅಧಿಕಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರದ ಭಾಷಣವನ್ನು ಸದನದಲ್ಲಿ ಓದುವ ಕೆಲಸ ಮಾಡಬೇಕು. ಆದರೆ ಸರ್ಕಾರದ ಭಾಷಣ ಓದದೆ ಅವರದ್ದೇ ಆದ ಭಾಷಣ ಓದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಪಾಲರಿಗೆ ಅಗೌರವ ತೋರಿಸಿದ 'ಕೈ' ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ: ಸ್ಪೀಕರ್ ಗೆ ಆರ್ ಅಶೋಕ್ ದೂರು
ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದು ಗೂಂಡಾಗಿರಿ ಎಂದು ಕಿಡಿಕಾರಿದರು. ಅಧಿವೇಶನವನ್ನು ಕಾಂಗ್ರೆಸ್ ಕರಾಳ ರೀತಿಯಲ್ಲಿ ನಡೆಸಿದೆ ಎಂದು ಆರೋಪಿಸಿದರು.

ಒಂದೇ ಸಾಲು, ಎರಡೇ ಮಾತು: ಭಾಷಣ ಅರ್ಧಕ್ಕೇ ಮೊಟಕುಗೊಳಿಸಿ ಸದನ ಬಿಟ್ಟು ನಿರ್ಗಮಿಸಿದ ರಾಜ್ಯಪಾಲ ಗೆಹ್ಲೋಟ್; Video
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ, ಸ್ಪೀಕರ್ ಮತ್ತು ಇತರರಿಗೆ ಶುಭಾಶಯ ಸೇರಿದಂತೆ 2 ಸಾಲುಗಳನ್ನು ಮಾತನಾಡಿದರು, ನಂತರ ಇಡೀ ಭಾಷಣವನ್ನು ಓದದೆ ಹೊರನಡೆದರು.

