ರಾಜಸ್ಥಾನ ಸರ್ಕಾರ

ಮಹಿಳೆಯರ ಮೇಲಿನ ಅಪರಾಧ ತಡೆಗಟ್ಟುವುದು ರಾಜಸ್ಥಾನ ಸರ್ಕಾರದ ಆದ್ಯತೆ: ಸಿಎಂ ಅಶೋಕ್ ಗೆಹ್ಲೋಟ್
ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ರಾಜಸ್ಥಾನ ಸರ್ಕಾರದ 100 ಯೂನಿಟ್ ವಿದ್ಯುತ್ ಉಚಿತ ಘೋಷಣೆಯನ್ನು ಲೇವಡಿ ಮಾಡಿದ ಬಿಜೆಪಿ
ಪ್ರತಿ ಮನೆಗೂ ತಿಂಗಳಿಗೆ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ರಾಜಸ್ಥಾನ ಸರ್ಕಾರದ ನಿರ್ಧಾರವನ್ನು ಲೇವಡಿ ಮಾಡಿರುವ ವಿರೋಧ ಪಕ್ಷ ಬಿಜೆಪಿ ಗುರುವಾರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರವಸೆಗಳನ್ನು ಈಡೇರಿಸದೆ ಇಂತಹ ಘೋಷಣೆಗಳನ್ನು ಮಾಡುತ್ತಲೇ ಇದ್ದಾರೆ ಎಂದು ಆರೋಪಿಸಿದೆ.

'ಕೈ' ಎಚ್ಚರಿಕೆ ಹೊರತಾಗಿಯೂ ಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹ!
ರಾಜಸ್ಥಾನ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಪಕ್ಷದ ಎಚ್ಚರಿಕೆ ಹೊರತಾಗಿಯೂ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಗೌತಮ್ ಅದಾನಿಗೆ ರಾಜಸ್ಥಾನ ಸರ್ಕಾರ ಯಾವುದೇ ಆದ್ಯತೆ ನೀಡಿಲ್ಲ: ರಾಹುಲ್ ಗಾಂಧಿ
ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಕೈಗಾರಿಕೋದ್ಯಮಿಗೆ ಯಾವುದೇ ಆದ್ಯತೆ ನೀಡಿಲ್ಲ ಮತ್ತು ನಾನು ಕಾರ್ಪೊರೇಟ್‌ಗಳ ವಿರುದ್ಧ ಅಲ್ಲ. ಆದರೆ, ಏಕಸ್ವಾಮ್ಯವನ್ನು ವಿರೋಧಿಸುತ್ತೇನೆ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಪತ್ನಿ ಮಗು ಪಡೆಯಲು ಗಂಡನಿಗೆ 15 ದಿನ ಪೆರೋಲ್: ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು...
ತಾಯಿಯಾಗಲು ಬಯಸಿದ ಮಹಿಳೆಯ ಮನವಿಯನ್ನು ಪುರಸ್ಕರಿಸಿದ್ದ ರಾಜಸ್ಥಾನ ಹೈಕೋರ್ಟ್, ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗೆ 15 ದಿನಗಳ ಪೆರೋಲ್ ನೀಡಿದ್ದ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಕೇಂದ್ರದ ಹೊಸ ಕೃಷಿ ಕಾಯ್ದೆ ತಡೆಗೆ ಮಸೂದೆ ಮಂಡಿಸಿದ ರಾಜಸ್ಥಾನ ಸರ್ಕಾರ
ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾಯಿದೆಯನ್ನು ತಡೆಯಲು ರಾಜಸ್ಥಾನ ಸರ್ಕಾರ ಶನಿವಾರ ಮೂರು ಮಸೂದೆಗಳನ್ನು ಮಂಡಿಸಿದೆ.

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ನಾಳೆ ಕಾಂಗ್ರೆಸ್ ನಿಂದ ಮತ್ತೊಂದು ಸಭೆ, ಸಚಿನ್ ಪೈಲಟ್‌ಗೂ ಆಹ್ವಾನ
ರಾಜಸ್ಥಾನದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಆಡಳಿತಾ ರೂಡ ಕಾಂಗ್ರೆಸ್ ಪಕ್ಷ ನಾಳೆ ಮತ್ತೊಂದು ಸಭೆ ಕರೆದಿದ್ದು, ಸಭೆಗೆ ಹಾಜರಾಗುವಂತೆ ಬಂಡಾಯ ನಾಯಕ ಸಚಿನ್ ಪೈಲಟ್ ಅವರಿಗೂ ಆಹ್ವಾನ ನೀಡಿದೆ.

ರಾಜಸ್ಥಾನ ಸರ್ಕಾರದ ಬಿಕ್ಕಟ್ಟು Live Updates: ಇತ್ತ ಸಿಎಲ್ ಪಿ ಸಭೆ, ಅತ್ತ ಕಾಂಗ್ರೆಸ್ ನಾಯಕರಿಗೆ ಐಟಿ ದಾಳಿಯ ಶಾಕ್!
ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟ ಜು.13 ರಂದು ಹೊಸ ತಿರುವು ಪಡೆದುಕೊಂಡಿದ್ದು ಕಾಂಗ್ರೆಸ್ ನಾಯಕರ ಮನೆ ಐಟಿ ದಾಳಿ ನಡೆದಿದೆ. ಐಟಿ ದಾಳಿಯ ನಡುವೆಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಲ್ ಪಿ ಸಭೆ ನಡೆಸುತ್ತಿದ್ದಾರೆ.

ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಆದರೆ ನಾವು ಐದು ವರ್ಷ ಅಧಿಕಾರದಲ್ಲಿ ಮುಂದುವರಿಯುತ್ತೇವೆ: ರಾಜಸ್ಥಾನ ಸಿಎಂ ಗೆಹ್ಲೋಟ್
ತಮ್ಮ ಶಾಸಕರಿಗೆ ದೊಡ್ಡ ಮೊತ್ತದ ಹಣವನ್ನು ನೀಡುವ ಮೂಲಕ ಪ್ರತಿಪಕ್ಷ ಬಿಜೆಪಿ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅದೇ ವೇಳೆ ತಮ್ಮ ಸರ್ಕಾರ ಸ್ಥಿರವಾಗಿದ್ದು ಐದು ವರ್ಷ ಆಡಳಿತವನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದರು.

