ರಾಜಕೀಯ ಬಿಕ್ಕಟ್ಟು

ಪ್ರಕ್ಷುಬ್ಧ ಇರಾನ್: ಖಮೇನಿ ಸಾವಿನ ಬೆನ್ನಲ್ಲೇ ಅಧಿಕಾರದ ಕಿತ್ತಾಟ (ಜಾಗತಿಕ ಜಗಲಿ)
ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿಯ ವಿಚಿತ್ರವಾದ ಮೌನ. ಮೊಜ್ತಾಬಾ ಸಾರ್ವಜನಿಕರ ದೃಷ್ಟಿಯಿಂದ ಬಹುತೇಕ ಸಂಪೂರ್ಣವಾಗಿ ಮರೆಯಾಗಿಯೇ ಉಳಿದಿದ್ದಾರೆ.

ಹಿಮಾಚಲ ಬಿಕ್ಕಟ್ಟು: ಸಿಂಘ್ವಿ ಸೋಲಿನ ಹೊಣೆ ಸುಖ್ ಹೆಗಲಿಗೆ, ಬಗೆಹರಿದ ಭಿನ್ನಾಭಿಪ್ರಾಯ- ಡಿಕೆ ಶಿವಕುಮಾರ್
ರಾಜ್ಯಸಭಾ ಚುನಾವಣೆಯಲ್ಲಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲಿನ ಹೊಣೆಯನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ ಹೊತ್ತುಕೊಂಡಿದ್ದು, ಪಕ್ಷದ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ನಂತರ ಎಲ್ಲಾ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ಕಾಂಗ್ರೆಸ್ ಕೇಂದ್ರ ವೀಕ್ಷಕರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸುಖ್ವಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆಯೇ? ಹಿಮಾಚಲ ಸಿಎಂ ಹೇಳಿದ್ದು ಹೀಗೆ...
ರಾಜ್ಯಸಭಾ ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ ನಂತರ ತಮ್ಮ ಸರ್ಕಾರ ಬಹುಮತ ಕಳೆದುಕೊಳ್ಳುವ ಅಪಾಯವಿದ್ದರೂ ಕೂಡ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸುಖ್ವಿಂದರ್ ಸಿಂಗ್ ಬುಧವಾರ ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು: ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಶಿಮ್ಲಾಗೆ ದೌಡು!
ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆಯೇ, ಉಪಮುಖ್ಯಮಂತ್ರಿ ಮತ್ತು ಹಿಮಾಚಲ ಪ್ರದೇಶದ ಕಾಂಗ್ರೆಸ್ ವೀಕ್ಷಕ ಡಿಕೆ ಶಿವಕುಮಾರ್ ಅವರನ್ನು ಬಿಕ್ಕಟ್ಟು ನಿರ್ವಹಣೆಗೆ ಮುಂದಾಗುವಂತೆ ಪಕ್ಷದ ನಿರ್ದೇಶಸಿದ ನಂತರ ಅವರು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ.

ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ಜೆಎಂಎಂ- ಕಾಂಗ್ರೆಸ್ ಶಾಸಕರ ಸ್ಥಳಾಂತರ
ಜಾರ್ಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಮೈತ್ರಿ ಪಕ್ಷ ಕಾಂಗ್ರೆಸ್ ತಮ್ಮ ಶಾಸಕರನ್ನು ಅಪರಿಚಿತ ಸ್ಥಳವೊಂದಕ್ಕೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ.

'ಮಹಾ' ರಾಜಕೀಯ ಬಿಕ್ಕಟ್ಟು: ವಿಶ್ವಾಸಮತ ಯಾಚಿಸಲು ಠಾಕ್ರೆಗೆ ರಾಜ್ಯಪಾಲ ಸೂಚನೆ; ಗುರುವಾರ ಮುಂಬೈಗೆ ವಾಪಸ್- ಏಕನಾಥ್ ಶಿಂಧೆ
ನಾಳೆ ಮುಂಬೈಗೆ ತೆರಳಲಿದ್ದು, ಬಹುಮತ ಸಾಬೀತು ಪಡಿಸಿ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುತ್ತೇನೆಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.

ದಾವೂದ್ ಜೊತೆ ನಂಟು ಹೊಂದಿರುವವರಿಗೆ ಶಿವಸೇನೆ ಬೆಂಬಲದ ವಿರುದ್ಧ ಬಂಡಾಯವೆದ್ದಿದ್ದೇವೆ, ಸಾವಿಗೆ ಹೆದರುವುದಿಲ್ಲ: ಏಕನಾಥ್ ಶಿಂಧೆ
ದಾವೂದ್ ಇಬ್ರಾಹಿಂನೊಂದಿಗೆ ಕೆಲ ನಾಯಕರು ನೇರ ಸಂಪರ್ಕ ಹೊಂದಿದ್ದು, ಇವರಿಗೆ ಬಾಳ್ ಠಾಕ್ರೆ ಅವರ ಪಕ್ಷವು ಬೆಂಬಲಿಸುತ್ತಿದೆ. ಇದರ ವಿರುದ್ಧ ನಾವು ಬಂಡಾಯ ಎದ್ದಿದ್ದೇವೆ. ಜೀವಕ್ಕೆ ಹೆದರುವುದಿಲ್ಲ ಎಂದು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ಕೊರೋನಾ ಪಾಸಿಟಿವ್; ಆಸ್ಪತ್ರೆ ದಾಖಲು
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವ ನಡುವಲ್ಲೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ: ಸರ್ಕಾರ ಪತನದ ಸುಳಿವು ನೀಡಿದ ಸಂಜಯ್ ರಾವತ್
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವಂತೆಯೇ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನಗೊಳ್ಳುವ ಸುಳಿವನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬುಧವಾರ ನೀಡಿದ್ದಾರೆ.

