ದೇಶಗೂಢಚಾರಿಕೆ ಪ್ರಕರಣ: ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಸಿಬಿಐ ವಿಚಾರಣೆಗೆ ಗೃಹ ಸಚಿವಾಲಯ ಒಪ್ಪಿಗೆ!
ರಾಜಕೀಯ ಗುಪ್ತಚರ ಸಂಗ್ರಹ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಐಎಎಸ್ ಅಧಿಕಾರಿ ಸೇರಿದಂತೆ ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಅವರನ್ನು ತನಿಖೆಗೊಳಪಡಿಸಲು ಕೇಂದ್ರ ಗೃಹ ಸಚಿವಾಲಯವು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಅನುಮೋದನೆ ನೀಡಿದೆ.