ದೇಶ'ನಾವು ಅವರಿಗೆ ರಾಜಕೀಯ ಅಸ್ಪೃಶ್ಯರು'; ವಿರೋಧ ಪಕ್ಷಗಳ ಮಿತ್ರಕೂಟ INDIA ಕುರಿತು ಎಐಎಂಐಎಂ ಹೇಳಿಕೆ
ಬೆಂಗಳೂರಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ವಿಪಕ್ಷಗಳ ಸಭೆಯಲ್ಲಿ ತಮ್ಮ ನಾಯಕರಿಗೆ ಆಹ್ವಾನ ನೀಡದ 26 ಸಮಾನ ಮನಸ್ಕ ಪಕ್ಷಗಳ ವಿರುದ್ಧ ಕಿಡಿಕಾರಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ನಾವು ಅವರಿಗೆ ರಾಜಕೀಯ ಅಸ್ಪೃಶ್ಯರು ಎಂದು ಅಸಮಾಧಾನ ವ್ಯಕ್ತಪಡಿಸಿದೆ.