ಸಿನಿಮಾ ಸುದ್ದಿಲೇಡಿ ಸೂಪರ್ಸ್ಟಾರ್ ಮಾಲಾಶ್ರೀ ಅಭಿನಯದ 'ನೈಟ್ ಕರ್ಫ್ಯೂ' ಈ ವಾರ ತೆರೆಗೆ
'ಕನ್ನಡ ಚಿತ್ರರಂಗದ ಲೇಡಿ ಸೂಪರ್ಸ್ಟಾರ್' ಎಂದೇ ಖ್ಯಾತರಾಗಿರುವ ಮಾಲಾಶ್ರೀ ಅವರು 'ನೈಟ್ ಕರ್ಫ್ಯೂ' ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಲು ಸಿದ್ಧರಾಗಿದ್ದಾರೆ. ಚಿತ್ರ ಈ ವಾರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಚಿತ್ರವು ಕನ್ನಡ-ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಮಾಲಾಶ್ರೀ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ ವೈದ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.