ದೇಶಶಾಲೆ-ಕಾಲೇಜುಗಳ ಪುನಾರಂಭ ವದಂತಿ; ಅಗಸ್ಟ್ ನಂತರವೇ ಪುನರಾರಂಭ: ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸ್ಪಷ್ಟನೆ
ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ನಡುವಲ್ಲೇ ಶಾಲೆಗಳ ಆರಂಭದ ಕುರಿತು ಗೊಂದಲಗಳು ಏರ್ಪಟ್ಟಿದೆ. ಈ ನಡುವಲ್ಲೇ ಶಾಲೆ, ಕಾಲೇಜುಗಳು ಅಗಸ್ಟ್ ಬಳಿಕಷ್ಟೇ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.