ಕ್ರಿಕೆಟ್ರಾಹುಲ್ ದ್ರಾವಿಡ್ ತಮ್ಮ ಶ್ರೇಷ್ಠ ಲಯದ ವೇಳೆ ಸಚಿನ್ಗೂ ಸಡ್ಡು ಹೊಡೆದಿದ್ದರು: ರಮೀಝ್ ರಾಜ
'ದಿ ವಾಲ್' ಎಂದೇ ಖ್ಯಾತಿ ಪಡೆದ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಒಬ್ಬ ದಿಗ್ಗಜ ಬ್ಯಾಟ್ಸ್ಮನ್ ಎಂಬುದನ್ನು ಅವರ ದಾಖಲೆಗಳೇ ಹೇಳುತ್ತವೆ. ರಾಹುಲ್ ಬ್ಯಾಟಿಂಗ್ಗೆ ಇಳಿದಾಗಲೆಲ್ಲಾ ಬೌಲರ್ಗಳಿಗೆ ಅಗ್ನಿ ಪರೀಕ್ಷೆ. ಏಕೆಂದರೆ ಅವರ ರಕ್ಷಣಾತ್ಮಕ ಬ್ಯಾಟಿಂಗ್ನ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭದ ಮಾತಲ್ಲ.