ರಾಜ್ಯಹಳೆ ವಾಹನಗಳನ್ನು ರದ್ದಿಗೆ ಹಾಕಿ, ಹೊಸ ವಾಹನ ಖರೀದಿ ಮೇಲೆ ರಿಯಾಯಿತಿ ಪಡೆಯಿರಿ
ಕರ್ನಾಟಕ ಸರ್ಕಾರವು ಮುಂದಿನ 15 ದಿನಗಳಲ್ಲಿ ವಾಹನಗಳನ್ನು ರದ್ದಿಗೆ ಹಾಕುವ ನೀತಿ(vehicle scrappage policy)ಯನ್ನು ಹೊರತರಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ರದ್ದಿಗೆ ಹಾಕಬೇಕೆಂದು ಘೋಷಿಸಿದ ಬಳಿಕ ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.