ರಕ್ಷಾ ಬಂಧನ್

ಶಾಲಾ ಮಕ್ಕಳೊಂದಿಗೆ 'ರಕ್ಷಾ ಬಂಧನ್' ಆಚರಿಸಿದ ಪ್ರಧಾನಿ ಮೋದಿ; ಗಡಿಯಲ್ಲಿ ಯೋಧರಿಗೆ ರಾಖಿ ಕಟ್ಟಿದ ಮಹಿಳೆಯರು!
ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೆಹಲಿಯ ವಿವಿಧ ಸಾಲೆಯ ಮಕ್ಕಳೊಂದಿಗೆ ರಕ್ಷಾ ಬಂಧನ್ ಆಚರಿಸಿದರು. ತನ್ನ ಮುಂಗೈಗೆ ರಾಖಿ ಕಟ್ಟುವ ಮಕ್ಕಳೊಂದಿಗೆ ಪ್ರಧಾನಿ ಸಂವಾದ ನಡೆಸುತ್ತಿರುವ ವಿಡಿಯೋಗಳನ್ನು ಎಎನ್ ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ.

ನನ್ನ ಸಿನಿಮಾಗಳು ಸೋತಿರುವುದಕ್ಕೆ ನಾನೇ ಕಾರಣ: ಸಿನಿಮಾಗಳ ಸರಣಿ ಫೇಲ್ಯೂರ್ ಬಗ್ಗೆ ಅಕ್ಷಯ್ ಕುಮಾರ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಇತ್ತೀಚಿನ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇದೀಗ ಅಕ್ಷಯ್ ಕುಮಾರ್, ನನ್ನದೇ ತಪ್ಪು ಎಂದಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್!
ಹಬ್ಬಗಳು, ಸಾಲು ಸಾಲು ರಜೆಗಳ ಹೊರತಾಗಿಯೂ ಬಾಲಿವುಡ್ ನ ಲಾಲ್ ಸಿಂಗ್ ಚಡ್ಡಾ, ರಕ್ಷಾ ಬಂಧನ್ ಚಿತ್ರಗಳು ಬಾಕ್ಸ್ ಆಫೀಸ್ ನಿರೀಕ್ಷೆ ಹುಸಿಗೊಳಿಸಿದ್ದು, ಮಕಾಡೆ ಮಲಗಿವೆ. ಬಾಲಿವುಡ್ ಬಾಕ್ಸ್ ಆಫೀಸ್ ಗೆ ಇದು ನಿಜಕ್ಕೂ ಆಘಾತದ ಸುದ್ದಿಯಾಗಿದೆ.

ರಕ್ಷಾ ಬಂಧನ್: ಮರಗಳಿಗೆ ರಾಖಿ ಕಟ್ಟಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್!
ರಕ್ಷಾ ಬಂಧನ್ ಆಚರಣೆ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜೆಡಿಯು ಪಕ್ಷದ ಮುಖ್ಯಸ್ಥರು ಆಗಿರುವ ನಿತೀಶ್ ಕುಮಾರ್ ಮರಗಳಿಗೆ ರಾಖಿ ಕಟ್ಟಿದ್ದಾರೆ.

ರಕ್ಷಾ ಬಂಧನ್: ಸಹೋದರಿ ಮಾತಿಗೆ ತಲೆಬಾಗಿ ಪೊಲೀಸರಿಗೆ ಶರಣಾದ ನಕ್ಸಲ್!
ರಕ್ಷಾ ಬಂಧನ್ ಶುಭ ಸಂದರ್ಭದಲ್ಲಿ ಮತ್ತೆ ಕಾಡಿಗೆ ವಾಪಸ್ ಹೋಗದಂತೆ ಸಹೋದರಿ ಮಾಡಿದ ಮನವಿಗೆ ತಲೆಬಾಗಿದ ನಕ್ಸಲ್ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಈತನ ತಲೆಗೆ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು.

