ಯೋಗ ಗುರು ರಾಮದೇವ್

'ಬಾಬಾ ಜೀ, ನನ್ನ ಯೌವನ ಅಥವಾ ಬೆಡ್‌ರೂಂ ಬಗ್ಗೆ ಹಗಲುಗನಸು ಕಾಣಬೇಡಿ': ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು
ಕಂಗಾನರ ಹೇಳಿಕೆಗಳನ್ನು ಟೀಕಿಸಿದ್ದ ಬಾಬಾ ರಾಮ್‌ದೇವ್ ಅವರು, 'ದೇಶದ ಯುವಕರನ್ನು 'ಜನರೇಷನ್ ಗಟರ್' ಎಂದು ಟೀಕಿಸುವುದು ಅವರ 'ಕೆಟ್ಟ ಮನಸ್ಥಿತಿಯನ್ನು' ತೋರಿಸುತ್ತದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿಯ 5 ಔಷಧಿ ಉತ್ಪನ್ನಗಳ ಮೇಲಿನ ನಿಷೇಧ ರದ್ದು
ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯಾ ಫಾರ್ಮಸಿಗೆ ಐದು ಔಷಧಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದ್ದ ತನ್ನ ಆದೇಶವನ್ನು ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ರದ್ದುಗೊಳಿಸಿದೆ.

ಸಲ್ಮಾನ್ ಖಾನ್, ಶಾರುಖ್ ಮಗ ಇಬ್ಬರೂ ಡ್ರಗ್ಸ್ ಸೇವಿಸುತ್ತಾರೆ; ಬಾಬಾ ರಾಮ್‌ದೇವ್ ಹೇಳಿಕೆ
ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

'ಬಾಬಾ ರಾಮದೇವ್ ಜನರಲ್ಲಿ ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ': ಯೋಗ ಗುರು ವಿರುದ್ಧ ಪಶ್ಚಿಮ ಬಂಗಾಳದಲ್ಲಿ ದೂರು ದಾಖಲು
ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಕೋವಿಡ್ ಸೋಂಕನ್ನು ಗುಣಪಡಿಸಲು ಸಾಧ್ಯವಾಗದಿರುವುದರಿಂದ ವೈದ್ಯರು ಸೇರಿದಂತೆ ಹಲವು ಕೋವಿಡ್ ಸೋಂಕಿತರು ಬಲಿಯಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಯೋಗ ಗುರು ರಾಮದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘದ ಪಶ್ಚಿಮ ಬಂಗಾಳ ವಿಭಾಗ ಪೊಲೀಸರಿಗೆ ದೂರು ಸಲ್ಲಿಸಿದೆ.

ಅಲೋಪಥಿ ಔಷಧಿ: ತೀವ್ರ ವಿರೋಧ ವ್ಯಕ್ತವಾದ ನಂತರ ಹೇಳಿಕೆ ಹಿಂಪಡೆದ ಯೋಗ ಗುರು ರಾಮದೇವ್
ಯೋಗ ಗುರು ರಾಮದೇವ್ ಅವರು ಅಲೋಪಥಿ ಔಷಧಿ ಬಗ್ಗೆ ಇತ್ತೀಚಿಗೆ ನೀಡಿದ ಹೇಳಿಕೆಗೆ ವೈದ್ಯವೃಂದದಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

