ದೇಶಐಶ್ವರ್ಯಾ ರೈ ಮಗಳ ಕುರಿತಾದ ಸುಳ್ಳು ಸುದ್ದಿ ಪ್ರಕಟಣೆಗೆ ಹೈಕೋರ್ಟ್ ನಿರ್ಬಂಧ; ವಿಡಿಯೋಗಳನ್ನು ತೆಗೆದುಹಾಕಲು ಗೂಗಲ್ಗೆ ನಿರ್ದೇಶನ
ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಆರೋಗ್ಯದ ಕುರಿತು ತಪ್ಪು ಮಾಹಿತಿಗಳನ್ನು ಪ್ರಕಟಿಸದಂತೆ ಹಲವಾರು ಯೂಟ್ಯೂಬ್ ಚಾನೆಲ್ಗಳನ್ನು ದೆಹಲಿ ಹೈಕೋರ್ಟ್ ಗುರುವಾರ ನಿರ್ಬಂಧಿಸಿದೆ. ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು 'ಅಸ್ವಸ್ಥ ವಿಕೃತತೆಯನ್ನು' ತೋರಿಸುತ್ತದೆ ಎಂದೂ ಅದು ಹೇಳಿದೆ.