ದೇಶಮುಚ್ಚಿರುವ ಉದ್ಯೋಗದ ಬಾಗಿಲನ್ನು ಯುವಕರಿಗೆ ಇಂಡಿಯಾ ಮೈತ್ರಿಕೂಟ ತೆರೆಯುತ್ತದೆ: ರಾಹುಲ್ ಗಾಂಧಿ
'ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿರುವ' ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದು, ಯುವಕರಿಗೆ ಮುಚ್ಚಿರುವ ಉದ್ಯೋಗಗಳ ಬಾಗಿಲು ತೆರೆಯುವುದು ಇಂಡಿಯಾ ಮೈತ್ರಿಕೂಟದ ಬಣದ ಸಂಕಲ್ಪವಾಗಿದೆ ಎಂದು ಪ್ರತಿಪಾದಿಸಿದ್ದಾರೆ.