ರಾಜ್ಯಗಂಗಾವತಿಯಲ್ಲಿ ಕೊರೋನಾ, ಆಸ್ಪತ್ರೆಗೆ ಹೋಗಬೇಡಿ ವದಂತಿ: ಸರ್ಕಾರಿ ವೈದ್ಯರಿಂದ ಠಾಣೆಗೆ ದೂರು
ನಗರದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ತಗುಲಿದೆ. ದಯವಿಟ್ಟು ಯಾರೂ ಆಸ್ಪತ್ರೆಗೆ ಹೋಗಬೇಡಿ ಎಂಬ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸಂದೇಶ ಹಿಡಿದು ಸರ್ಕಾರಿ ಆಸ್ಪತ್ರೆಯ ವೈದ್ಯರು ಠಾಣೆಯ ಮಟ್ಟಿಲೇರಿದ್ದಾರೆ.