ವಿದೇಶಚೀನಾ ಸೇನೆ ಯುದ್ಧಗಳನ್ನು ಗೆಲ್ಲುವ ಬಗ್ಗೆ ಗಮನಹರಿಸಬೇಕು; 2027ರ ವೇಳೆಗೆ ಅಮೆರಿಕಾ ಪಡೆಗಳಿಗೆ ಸಮನಾಗಬೇಕು: ಕ್ಸಿ ಜಿನ್ಪಿಂಗ್
2027 ರ ವೇಳೆಗೆ ಪಿಎಲ್ಎ ಯನ್ನು ಅಮೆರಿಕಾ ಸೇನೆಗೆ ಸಮನಾಗಿ ತಯಾರು ಮಾಡುವ ಯೋಜನೆಯನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ರೂಪಿಸಿದ್ದು ಇದಕ್ಕಾಗಿ ನೈಜ ಯುದ್ಧ ಪರಿಸ್ಥಿತಿಗಳಲ್ಲಿ ತರಬೇತಿಯ ಹೆಚ್ಚಳ ಹಾಗೂ ಯುದ್ಧಗಳನ್ನು ಗೆಲ್ಲುವ ಸಾಮರ್ಥ್ಯ ಹೆಚ್ಚಳಕ್ಕೆ ಸಶಸ್ತ್ರ ಪಡೆಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆದೇಶಿಸಿದ್ದಾರೆ.