ವಿದೇಶಕದನ ವಿರಾಮ ಅಂತ್ಯ: ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ; 'ಶರಣಾಗುವುದಿಲ್ಲ' ಎಂದ ಇರಾನ್
ಕಳೆದ ತಿಂಗಳಿನಿಂದ ಇರಾನ್ ಮತ್ತು ಅಮೆರಿಕದ ನಡುವೆ ನೇರ ಮಾತುಕತೆ ನಡೆದಿಲ್ಲ. ಆದರೆ, ಈ ವಾರ ಎರಡೂ ದೇಶಗಳು ಮತ್ತೆ ಪರಸ್ಪರ ದಾಳಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ, ಮಧ್ಯವರ್ತಿಯಾಗಿರುವ ಕತಾರ್ನ ನಿಯೋಗವು ಟೆಹ್ರಾನ್ಗೆ ಭೇಟಿ ನೀಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.