ದೇಶರಾಷ್ಟ್ರಪತಿಗಳಿಂದ ಪ್ರಧಾನಿ ರಾಷ್ಟ್ರೀಯ ಬಾಲ ಪುರಸ್ಕಾರ ಸ್ವೀಕರಿಸಿದ ಬೆಂಗಳೂರಿನ ಯಶ್ ಆರಾಧ್ಯ!
ಬೆಂಗಳೂರಿನ ಯಶ್ ಆರಾಧ್ಯ ಪ್ರತಿಷ್ಠಿತ ಪ್ರಧಾ ನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ಮೋಟಾರ್ ಸ್ಪೋರ್ಟ್ಸ್ ಪಟು ಎನ್ನುವ ಹಿರಿಮೆಗೆ ಗುರುವಾರ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಯಶ್ ಪ್ರಶಸ್ತಿ ಸ್ವೀಕರಿಸಿದರು.