ಮ್ಯಾಟ್ನಿ

ಸತೀಶ್ ನೀನಾಸಂ, ರಚಿತಾ ರಾಮ್ ಅಭಿನಯದ 'ಮ್ಯಾಟ್ನಿ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಈ ಹಿಂದೆ ಮಹೇಶ್ ಕುಮಾರ್ ಅವರ 'ಅಯೋಗ್ಯ' ಚಿತ್ರದ ಮೂಲಕ ವಿಶೇಷವಾಗಿ 'ಏನಮ್ಮಿ ಏನಮ್ಮಿ' ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿ ಇದೀಗ 'ಮ್ಯಾಟ್ನಿ' ಎಂಬ ರೋಮ್ಯಾಂಟಿಕ್ ಥ್ರಿಲ್ಲರ್ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ.

‘ಏನಮ್ಮಿ, ಏನಮ್ಮಿ...’ ಬಳಿಕ ಮತ್ತೊಂದು ಹಿಟ್ ಹಾಡು ನೀಡಿದ ರಚಿತಾ ರಾಮ್-ಸತೀಶ್ ನೀನಾಸಂ: 'ಮ್ಯಾಟ್ನಿ’ ಗೀತೆಗೆ ಮರುಳಾದ ಫ್ಯಾನ್ಸ್!
2018ರಲ್ಲಿ ತೆರೆಕಂಡ ಅಯೋಗ್ಯ ಚಿತ್ರದ ‘ಏನಮ್ಮಿ ಏನಮ್ಮಿ..’ ಹಾಡಿಗೆ ಕೇಳುಗರು ಮನಸೋತಿದ್ದರು. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅವರು ಜೋಡಿಯಾಗಿ ಕಾಣಿಸಿಕೊಂಡ ಆ ಗೀತೆ ಇಂದಿಗೂ ಟ್ರೆಂಡಿಂಗ್ನಲ್ಲಿ ಇದೆ. ಇದೀಗ ಇದೇ ಜೋಡಿಯ ಮತ್ತೊಂದು ಸಿನಿಮಾದ ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕುಲು ಮನಾಲಿಯಲ್ಲಿ ಮ್ಯಾಟ್ನಿ ಹಾಡಿನ ಚಿತ್ರೀಕರಣದಲ್ಲಿ ನಟ ಸತೀಶ್ ನೀನಾಸಂ- ನಟಿ ಅದಿತಿ ಪ್ರಭುದೇವ
ನಿರ್ದೇಶಕ ಮನೋಹರ್ ಕಾಂಪಲ್ಲಿ ಅವರ ಮುಂಬರುವ ರೋಮ್ಯಾಂಟಿಕ್ ಥ್ರಿಲ್ಲರ್ ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ. ಸದ್ಯ, ಕೊನೆಯ ಹಂತದ ಶೂಟಿಂಗ್‌ನಲ್ಲಿ, ತಂಡವು ಇತ್ತೀಚೆಗೆ ಕುಲು ಮನಾಲಿಗೆ ಭೇಟಿ ನೀಡಿತು. ಅಲ್ಲಿ ಸತೀಶ್ ಮತ್ತು ಅದಿತಿ ಹಾಡೊಂದನ್ನು ಚಿತ್ರೀಕರಿಸಿದ್ದಾರೆ.

ರೋಮ್ಯಾಂಟಿಕ್ ಥ್ರಿಲ್ಲರ್ 'ಮ್ಯಾಟ್ನಿ' ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್
ಅಯೋಗ್ಯ ಚಿತ್ರದ ಜೋಡಿ ಮತ್ತೆ ಒಂದಾಗಿದೆ. ಮನೋಹರ್ ಕಾಂಪಳ್ಳಿ ಚೊಚ್ಚಲ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ 'ಮ್ಯಾಟ್ನಿ' ಚಿತ್ರದಲ್ಲೂ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.

