ದೇಶಮುಂಬೈ: ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ, ವ್ಯಕ್ತಿಯ ಬಂಧನ
ವಾಣಿಜ್ಯ ನಗರಿ ಮುಂಬೈನ ಬಾಂದ್ರಾದಲ್ಲಿನ ಮೌಂಟ್ ಮೇರಿ ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚರ್ಚ್ ಸ್ಫೋಟಿಸುವುದಾಗಿ ಇ- ಮೇಲ್ ಕಳುಹಿಸಿದ ನಂತರ ಕೊಲ್ಕತ್ತಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.