ದೇಶಸಸಾರಾಂ ಹಿಂಸಾಚಾರ; ಆತ್ಮರಕ್ಷಣೆಗಾಗಿ ಮುಸ್ಲಿಂರು ಬಾಂಬ್ ತಯಾರಿಸುತ್ತಿದ್ದಾರೆ: ಆರ್ಜೆಡಿ ಶಾಸಕ!
ಸಸಾರಾಂ ನಲ್ಲಿ ರಾಮ ನವಮಿ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದ್ದು ಅಂದಿನಿಂದ ಇಲ್ಲಿಯವರೆಗೆ ಹಿಂಸಾಚಾರ ನಿಲ್ಲುವ ಸುಳಿವು ಕಾಣುತ್ತಿಲ್ಲ. ಇಂದು ಸಹ ಸಸಾರಂನಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಅಲ್ಲಿ ಬೆಳಗಿನ ಜಾವ ಸ್ಫೋಟ ಸದ್ದು ಕೇಳಿಸಿತ್ತು. ಇದಾದ ನಂತರ ಎಸ್ಎಸ್ಬಿ ಜವಾನರನ್ನು ಇಲ್ಲಿಗೆ ಕರೆಸಿತು.