ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ

ಸಂಚಾರಿ ನಿಯಮ ಉಲ್ಲಂಘನೆ: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ 13.41 ಲಕ್ಷ ಕೇಸ್ ದಾಖಲು
ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಕ್ಸ್ ಪ್ರೆಸ್ ವೇನ ಆಯ್ದು12 ಕಡೆಗಳಲ್ಲಿ ಅಂದರೆ ಮಂಡ್ಯ ಜಿಲ್ಲೆಯಲ್ಲಿ 5, ರಾಮನಗರ ಜಿಲ್ಲೆಯ 5 ಮತ್ತು ಮೈಸೂರು ಜಿಲ್ಲೆಯ 2 ಕಡೆಗಳಲ್ಲಿ AI ಚಾಲಿತ ಕ್ಯಾಮರಾಗಳನ್ನು ಅಳವಡಿಸಿದೆ.

ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಇಬ್ಬರು ದಂಪತಿಯ ದರೋಡೆ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ದರೋಡೆ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ದಂಪತಿಯ ಚಿನ್ನದ ಸರವನ್ನು ದೋಚಿದ್ದಾರೆ.

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: ಮತ್ತೊಂದು ಸರಣಿ ಅಪಘಾತ, ಹಲವರಿಗೆ ಗಾಯ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಭಾನುವಾರ ಸಂಜೆ ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ. ಮದ್ದೂರು ಬೈಪಾಸ್ ರಸ್ತೆಯ ಕೆ. ಕೋಡಿಹಳ್ಳಿ ಬಳಿ ಕೆಎಸ್ ಆರ್ ಟಿಸಿ ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮಳೆ ನೀರು: ನರೇಂದ್ರ ಮೋದಿ ರೋಡ್ ಶೋ ಮಾಡಲು ಕಾಂಗ್ರೆಸ್ ಆಹ್ವಾನ
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಶುಕ್ರವಾರ ರಾತ್ರಿ ಮಳೆ ನೀರಿನಿಂದ ತುಂಬಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಈ ಕುರಿತ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪ್ರಧಾನಿ ಮೋದಿ ರಾಜ್ಯ ಪ್ರವಾಸ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆ, ಐಐಟಿ ಕ್ಯಾಂಪಸ್ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದು, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿ, ಮೈಸೂರು- ಕುಶಾಲನಗರ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ; ಟೋಲ್ ಸಂಗ್ರಹ ಮುಂದೂಡಿಕೆ- ಪ್ರತಾಪ್ ಸಿಂಹ
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮೊದಲ ಹಂತದ ಟೋಲ್ ಕೇಂದ್ರಗಳಲ್ಲಿ ಶುಲ್ಕ ಸಂಗ್ರಹ ಕಾರ್ಯವನ್ನು ಮುಂದೂಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

