ರಾಜ್ಯಬೆಳಗಾವಿ: 100 ಅಡಿ ಆಳದ ಬಾವಿಗೆ ಬಿದ್ದು ಮುಳುಗುತ್ತಿದ್ದ ಮೂರು ವರ್ಷದ ಬಾಲಕನನ್ನು ರಕ್ಷಿಸಿದ ಮೇಸ್ತ್ರಿ
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಬೆಳಗಾವಿ ಸಮೀಪದ ಪಾಟ್ನೆ-ಫಟಾ ಗ್ರಾಮದಲ್ಲಿ ಸೋಮವಾರ ಆಕಸ್ಮಿಕವಾಗಿ 100 ಅಡಿ ಆಳದ ಬಾವಿಗೆ ಬಿದ್ದ ಮೂರು ವರ್ಷದ ಬಾಲಕನ ಜೀವವನ್ನು ಬೆಳಗಾವಿಯಲ್ಲಿ ಗಾರೆ ಕೆಲಸ ಮಾಡುವ 40 ವರ್ಷದ ಮೇಸ್ತ್ರಿಯೊಬ್ಬರು ರಕ್ಷಿಸಿದ್ದಾರೆ.