ರಾಜ್ಯಕೋಲಾರದಲ್ಲಿ ದೇವರ ಮೆರವಣಿಗೆ ವಿಚಾರ: ದಲಿತ- ಮೇಲ್ವರ್ಗದವರ ನಡುವಿನ ಹಗೆತನ ನಿರ್ಮೂಲನಕ್ಕೆ ಸೇತುವೆಯಾದ ಪೊಲೀಸರು
ಘಟನೆ ನಡೆದ 24 ಗಂಟೆಯೊಳಗೆ ಕೋಲಾರ ಪೊಲೀಸರು ಎಸ್ಪಿ ಡಿ. ದೇವರಾಜ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಸಮುದಾಯಗಳ ನಡುವಿನ ವೈಷಮ್ಯವನ್ನು ಬಗೆಹರಿಸಲು ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದು ಕೇಂದ್ರ ಶ್ರೇಣಿಯ ಐಜಿಪಿ ಎಂ ಚಂದ್ರಶೇಖರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.