ಮೆಲೋನಿ

Air Force One ಫೋಟೋ ತಿರುಚಿ ಒಬಾಮಾ ದಂಪತಿಯನ್ನು ಗುರಿಯಾಗಿಸಿದ ಟ್ರಂಪ್: ಇಟಲಿ ಪ್ರಧಾನಿ ಮೆಲೋನಿಗೂ ಅವಮಾನ, ಪೋಸ್ಟ್‌ಗೆ ಭಾರೀ ಆಕ್ರೋಶ!
ಟ್ರಂಪ್ ಹಂಚಿಕೊಂಡಿರುವ ಚಿತ್ರದಲ್ಲಿ ಬರಾಕ್ ಮತ್ತು ಮಿಶೆಲ್ ಒಬಾಮಾ ನಗುತ್ತಾ ಕೈ ಬೀಸುತ್ತಾ ಏರ್ ಫೋರ್ಸ್ ಒನ್ ವಿಮಾನವನ್ನು ಏರುತ್ತಿರುವಂತೆ ಕಾಣಿಸುತ್ತದೆ. ಆದರೆ ವಿಮಾನದ ಮೇಲೆ "Yes We Can", "Obama" ಮತ್ತು BLM (Black Lives Matter) ಎಂಬ ಬರಹಗಳನ್ನು ಬರೆಯಲಾಗಿದೆ.

ಟ್ರಂಪ್ ಜೊತೆಗಿನ ಫೋಟೋ ಫೈಟ್‌ಗೆ ಮೆಲೋನಿ ಫುಲ್ ಸ್ಟಾಪ್: ಅಮೆರಿಕದೊಂದಿಗೆ ಬಾಂಧವ್ಯ ಮುಂದುವರಿಸಲು ನಿರ್ಧಾರ..!
ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಮೆಲೋನಿ ಪದೇ ಪದೇ ತನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮನವಿ ಮಾಡಿದ್ದರು ಮತ್ತು ಅವರ ಮೇಲೆ ಕರುಣೆ ಬಂದ ಕಾರಣ ನಾನು ಒಪ್ಪಿಕೊಂಡೆ ಎಂದು ಟ್ರಂಪ್ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಆರ್ಥಿಕತೆ ಎಕ್ಕುಟ್ಟಿ ಹೋಗಲಿ, ಆದ್ರೆ ಮೆಲೋನಿಗೆ 'ಮೆಲೋಡಿ' ಕೊಡುವುದು ತಡವಾಗ್ಬಾರ್ದು: ಖರ್ಗೆ ಕಿಡಿ
ಎಕ್ಸ್ ನಲ್ಲಿ ಮೋದಿ ಹಾಗೂ ಮೆಲೋನಿ ಅವರ ವಿಡಿಯೋ ಹಂಚಿಕೊಂಡು ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಮುಖವಾಗಿ, ಇಂಧನ ಹಾಗೂ ಆರ್ಥಿಕ ಬಿಕ್ಕಟ್ಟು ಪರಿಹಾರ ಎಕ್ಕುಟ್ಟಿ ಹೋಗಲಿ. ಆದರೆ ಮೆಲೋನಿ ಅವರಿಗೆ ಮೆಲೋಡಿ ನೀಡುವುದು ತಡವಾಗಬಾರದು ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಜೊತೆ ಸೆಲ್ಫೀ: ಒಳ್ಳೆಯ ಸ್ನೇಹಿತ ಎಂದು ಪೋಸ್ಟ್ ಮಾಡಿದ ಇಟಲಿ ಪ್ರಧಾನಿ ಮೆಲೋನಿ
ಸಿಓಪಿ 28 ಶೃಂಗಸಭೆಗೆ ದುಬೈಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

