ಮೆಣಸಿನಕಾಯಿ

ಬಳ್ಳಾರಿ: ನೀತಿ ಸಂಹಿತೆ ಜಾರಿ ಬೆನ್ನಲ್ಲೇ ದಾಖಲೆ ಇಲ್ಲದ 15 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ವಶಕ್ಕೆ
ಲೋಕಸಭೆ ಸಾರ್ವತ್ರಿಕ ಚುನಾವಣೆ 2024ರ ಅಂಗವಾಗಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಳೆದ ಎರಡು ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿಯನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಿಎ ಓದು ಬಿಟ್ಟು, ಕೃಷಿಯಲ್ಲಿ ಯುವತಿ ಸಾಧನೆ: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ
ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಈ ಯುವತಿ ಸಾಧನೆ ಮಾಡಿದ್ದಾಳೆ. ಈಕೆ ಗಡಿ ಜಿಲ್ಲೆಯ ಪುಟ್ಟ ಗ್ರಾಮದ ನಿವಾಸಿ, ಬಡ ರೈತನ ಮಗಳಾದರೂ ಸಿಎ ಆಗಬೇಕೆಂಬ ದೊಡ್ಡ ಕನಸು ಕಂಡಿದ್ದಳು. ಆದರೆ, ತಂದೆಯ ನಿಧನದಿಂದಾಗಿ ವ್ಯಾಸಂಗ ಮೊಟಕುಗೊಳಿಸಿದ್ದ ಈಕೆ, ಕೃಷಿಯತ್ತ ಮುಖ ಮಾಡಿ, ಅಮೋಘ ಸಾಧನೆ ಮಾಡಿದ್ದಾಳೆ...

ಗಗನಮುಖಿಯಾದ ಮೆಣಸಿನಕಾಯಿ ಬೆಲೆ: ಕಳ್ಳರಿಂದ ರಕ್ಷಿಸಲು ಕೊರೆಯುವ ಚಳಿ ಲೆಕ್ಕಿಸದೆ ಬೆಳೆ ಕಾಯುತ್ತಿರುವ ರೈತರು!
ಸತತ ಮಳೆಯಿಂದ ರಾಜ್ಯಾದ್ಯಂತ ರೈತರು ನಷ್ಟ ಅನುಭವಿಸಿದ್ದಾರೆ, ಆದರೆ ಗದಗ ಮಾರುಕಟ್ಟೆಯಲ್ಲಿ ಈ ವರ್ಷ ಕ್ವಿಂಟಲ್‌ಗೆ 45,000 ರೂ.ಗೆ ಸಿಗುತ್ತಿರುವುದರಿಂದ ಮೆಣಸಿನಕಾಯಿ ಬೆಳೆಗಾರರು ಸಂತಸಗೊಂಡಿದ್ದಾರೆ.

ಬಳ್ಳಾರಿ: ಒಂದೇ ರಾತ್ರಿಯಲ್ಲಿ 1 ಕೋಟಿ ರೂ. ಮೌಲ್ಯದ ಮೆಣಸಿನಕಾಯಿ ಹಾನಿ!
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುರುಗೋಡು ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

