ರಾಜ್ಯಬ್ಯಾಂಕ್ ಸಿಬ್ಬಂದಿ, ಹೂಡಿಕೆ ಸಂಸ್ಥೆ ಅಧಿಕಾರಿಗಳು ಶಾಮೀಲು, ಮೃತ ಮಹಿಳೆ ಹೆಸರಿನಲ್ಲಿ ಖಾತೆ ತೆರೆದು 13 ಕೋಟಿ ರೂ. ವಂಚನೆ!
ತಮಿಳುನಾಡಿನ ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಖಾಸಗಿ ಹೂಡಿಕೆ ಸಂಸ್ಥೆಗಳ ಅಧಿಕಾರಿಗಳು ಪರಸ್ಪರ ಶಾಮೀಲಾಗಿ ಅದೇ ಬ್ಯಾಂಕ್ ಶಾಖೆಯಲ್ಲಿ ಮೃತ ಮಹಿಳೆಯ ಹೆಸರಿನಲ್ಲಿ ಖಾತೆ ತೆರೆದು ಆಕೆಯ ಖಾತೆಯಿಂದ 13 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.