ಮೂಲಭೂತ ಹಕ್ಕು

ಕಾಲುದಾರಿಯಲ್ಲಿ ನಡೆಯುವ ಹಕ್ಕಿಗೆ ಮೂಲಭೂತ ಹಕ್ಕಿನ ಮಾನ್ಯತೆ ಸಿಗುವುದಾದರೆ, ಮತದಾನದ ಹಕ್ಕಿಗೆ ಯಾಕಿಲ್ಲ?; ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ
ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದ್ದು, ರಸ್ತೆಗಳಲ್ಲಿ ಮೋಟಾರು ವಾಹನಗಳ ಚಲನೆಗಿಂತ ಈ ಹಕ್ಕು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಜಾಮೀನು ಅರ್ಜಿ ಒಂದು ದಿನ ವಿಳಂಬವಾದರೂ ನಾಗರಿಕರ ಮೂಲಭೂತ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ: ಸುಪ್ರೀಂ ಕೋರ್ಟ್
ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ನೀಡಿದ ಆದೇಶದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಹತ್ವವನ್ನು ಪದೇ ಪದೇ ಒತ್ತಿಹೇಳಿದೆ.

ನಗುವುದನ್ನೂ ಮೂಲಭೂತ ಹಕ್ಕುಗಳಡಿ ತರಲು ಸಂವಿಧಾನಕ್ಕೆ ಬಹುಶಃ ತಿದ್ದುಪಡಿ ಬೇಕೇನೋ: ಮದ್ರಾಸ್ ಹೈಕೋರ್ಟ್ ಹೀಗೆ ಹೇಳಿದ್ದು ಏಕೆಂದರೆ...
ಶೀರ್ಷಿಕೆ ಓದಿದ ಓದುಗರಿಗೆ ಕೋರ್ಟ್ ಯಾಕೆ ಹೀಗೆ ಹೇಳಿತು ನಗುವುದನ್ನು ಮೂಲಭೂತ ಹಕ್ಕುಗಳಡಿ ತರಲು ಕೋರ್ಟ್ ನಿಜವಾಗಿಯೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ.

ಮೀಸಲಾತಿ ಮೂಲಭೂತ ಹಕ್ಕಲ್ಲ; ಸುಪ್ರೀಂ ಕೋರ್ಟ್
ಮೀಸಲಾತಿ ಹಕ್ಕು ಎಂಬುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

ಇಂಟರ್‌ನೆಟ್ ಸಂಪರ್ಕ ಮೂಲಭೂತ ಹಕ್ಕಲ್ಲ, ರಾಷ್ಟ್ರ ಭದ್ರತೆಯೇ ಮುಖ್ಯ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಅಂತರ್ಜಾಲ ಸಂಪರ್ಕ ಮೂಲಭೂತ ಹಕ್ಕು, ಅದು ದೇಶದ ಪ್ರತೀಯೊಬ್ಬ ನಾಗರೀಕನನ್ನೂ ತಲುಪಬೇಕು ಎಂಬ ವಾದದಲ್ಲಿ ಹುರುಳಿಲ್ಲ. ಇಂಟರ್ನೆಟ್ ಮೂಲಭೂತ ಹಕ್ಕಲ್ಲ ಎಂದು ಕೇಂದ್ರ ಕಾನೂನು, ನ್ಯಾಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸಂವಿಧಾನದಲ್ಲಿ ಸೇರಿಸಿ: ಉನ್ನತ ಮಟ್ಟದ ಸಮಿತಿಯಿಂದ ಸರ್ಕಾರಕ್ಕೆ ಒತ್ತಾಯ
ಸಂವಿಧಾನದ ಏಕಕಾಲಿಕ ಪಟ್ಟಿಯಲ್ಲಿ ಆರೋಗ್ಯ ವಲಯವನ್ನು ಸೇರಿಸುವುದರಿಂದ ರಾಜ್ಯ ಸ್ವಾಯತ್ತತೆಯನ್ನು ತೆಗೆದುಹಾಕಿ ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೇವೆಯನ್ನು ಕೇಂದ್ರ ಸರ್ಕಾರದ ಅಧಿಕಾರದ ಸುಪರ್ದಿಗೆ ನೀಡುತ್ತದೆ.

ಮೂಲಭೂತ ಹಕ್ಕಿನ ಉಲ್ಲಂಘನೆಯಾಗದಂತೆ ರಕ್ಷಣೆ ನೀಡುವುದು ನ್ಯಾಯಾಂಗದ ಕರ್ತವ್ಯ: ಸುಪ್ರೀಂ ಕೋರ್ಟ್
ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಪಕ್ಷದಲ್ಲಿ ಸರ್ಕಾರಗಳು ಜಾರಿಗೆ ತರುವ ಕಾನೂನು ತಿದ್ದುಪಡಿಯನ್ನೇ ಕಾದು ಕುಳಿತಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಲೈಂಗಿಕ ದೃಷ್ಟಿಕೋನವಲ್ಲ, ಲೈಂಗಿಕ ಸಂಗಾತಿ ಆಯ್ಕೆ ಮಾತ್ರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ಲೈಂಗಿಕ ದೃಷ್ಟಿಕೋನ ಎಂದಿಗೂ ಮೂಲಭೂತ ಹಕ್ಕಾಗಲು ಸಾಧ್ಯವಿಲ್ಲ. ಆದರೆ ಲೈಂಗಿಕ ಸಂಗಾತಿಯ ಆಯ್ಕೆ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.

ಖಾಸಗಿತನ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ ನಿಂದ ಇಂದು ತೀರ್ಪು ಪ್ರಕಟ
ಖಾಸಗಿತನ ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬ ಬಗ್ಗೆ ಸುಪ್ರೀಂ ಕೋರ್ಟ್ಇಂದು ಮಹತ್ವದ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

