ದೇಶರಣಚಂಡಿ ಮಳೆಗೆ ದೆಹಲಿ ತತ್ತರ: ಮೂರು ನೀರು ಸಂಸ್ಕರಣಾ ಘಟಕ ಬಂದ್, ಕುಡಿಯುವ ನೀರಿಗೆ ತಾತ್ವಾರ!
ರಣಚಂಡಿ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳನ್ನು ಬಂದ್ ಮಾಡಿದ ನಂತರ ಸರ್ಕಾರ ಶೇ. 25 ರಷ್ಟು ನೀರಿನ ಪೂರೈಕೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಕುಡಿಯುವ ನೀರಿನ ಕೊರತೆ ಎದುರಾಗಿದೆ.