ಆರೋಗ್ಯಕಿಡ್ನಿ ಸ್ಟೋನ್: ನಿರ್ಲಕ್ಷಿಸಿದರೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಲ್ಲಹುದು; ಕಲ್ಲು ಸಣ್ಣದಿದೆ ಎಂದು ಕಡೆಗಣಿಸದಿರಿ...
ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದು ಸಾಮಾನ್ಯ ಮೂತ್ರಪಿಂಡದ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 12ರಷ್ಟು ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿಂದಿ ಬಳಲುತ್ತಿರುವವರು ನಿರ್ಲಕ್ಷ್ಯದಿಂದ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ, ಮೂತ್ರಪಿಂಡ ವೈಫಲ್ಯ ಎದುರಿಸುವ ಸಾಧ್ಯತೆಗಳಿರುತ್ತವೆ.