ಸಿನಿಮಾ ಸುದ್ದಿಆನೆಗುಡ್ಡೆ ಗಣಪತಿ ದೇಗುಲದಲ್ಲಿ ಸೆಟ್ಟೇರಿದ ಸುಚನ್ ಶೆಟ್ಟಿ ನಿರ್ದೇಶನದ 'ಗಾಡ್ ಪ್ರಾಮಿಸ್'; ಪ್ರಮೋದ್ ಶೆಟ್ಟಿ-ರವಿ ಬಸ್ರೂರು ಸಾಥ್
ಸುಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ 'ಗಾಡ್ ಪ್ರಾಮಿಸ್' ಚಿತ್ರದ ಸರಳ ಮುಹೂರ್ತ ಕಾರ್ಯಕ್ರಮ ಉಡುಪಿ ಜಿಲ್ಲೆಯ ಕುಂದಾಪುರದ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ನಟ ಪ್ರಮೋದ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದ್ದು, ಸಂಗೀತ ನಿರ್ದೇಶಕ ರವಿ ಬಸ್ರೂರ್ ಕ್ಲಾಪ್ ಮಾಡಿ ಚಿತ್ರಕ್ಕೆ ಬೆಂಬಲ ಸೂಚಿಸಿದರು.