ಮುಸ್ಲಿಂ ದಂಪತಿ

ಕೊಲ್ಹಾಪುರ ರೈಲಿನಲ್ಲಿ ಹುಟ್ಟಿದ ಮಗುವಿಗೆ ''ಮಹಾಲಕ್ಷ್ಮಿ'' ಎಂದು ಹೆಸರಿಟ್ಟ ಮುಸ್ಲಿಂ ದಂಪತಿ
ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ 'ಮಹಾಲಕ್ಷ್ಮಿ' ಎಂದು ನಾಮಕರಣ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಹಿಂದೂ ಅಪ್ರಾಪ್ತ ಬಾಲಕಿಯೊಂದಿಗೆ ಮಗನ ಸಂಬಂಧ; ಮುಸ್ಲಿಂ ದಂಪತಿಯನ್ನು ಹೊಡೆದು ಕೊಂದ ಗುಂಪು!
ಮುಸ್ಲಿಂ ಯುವಕನೋರ್ವ ಹಿಂದೂ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋದ ನಂತರ ಯುವಕನ ತಂದೆ-ತಾಯಿಯನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಂದಿದೆ ಎಂದು ಹೇಳಲಾಗಿದೆ. ಯುವತಿಯು ಹಲ್ಲೆಕೋರರಲ್ಲಿ ಒಬ್ಬನ ಮಗಳು ಎಂದು ವರದಿಯಾಗಿದೆ.

ಸೌಹಾರ್ದತೆಯ ಸಂದೇಶ: ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ಜೋಡಿ ವಿವಾಹ!
ಸಮಾಜಕ್ಕೆ ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಲು ಮುಸ್ಲಿಂ ಜೋಡಿಯೊಂದು ಭಾನುವಾರ ಹಿಂದೂ ದೇವಾಲಯದ ಆವರಣದಲ್ಲಿ ಸತಿ ಪತಿಗಳಾಗಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಮ್‌ಪುರದ ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ವಿವಾಹ ಪದ್ಧತಿಯಂತೆ ವಿವಾಹ ನಡೆದಿದೆ.

ಗರ್ಭದಲ್ಲಿನ ಮಗುವಿನ ದತ್ತು ಒಪ್ಪಂದಕ್ಕೆ ಕಾನೂನಿನಲ್ಲಿ ಮಾನ್ಯತೆಯಿಲ್ಲ: ಮುಸ್ಲಿಂ ದಂಪತಿಯಿಂದ ಹಿಂದೂ ಮಗುವಿನ ದತ್ತು ರದ್ದುಗೊಳಿಸಿದ ಹೈಕೋರ್ಟ್
ಮುಸ್ಲಿಂ ದಂಪತಿಗಳಿಂದ ಹಿಂದೂ ಮಗುವಿನ ದತ್ತು ವಿಚಾರಕ್ಕೆ ಸಂಬಂಧಿಸಿದಂತೆ ಗರ್ಭದಲ್ಲಿನ ಮಗುವಿನ ದತ್ತು ಒಪ್ಪಂದವನ್ನು ಹೈಕೋರ್ಟ್ ರದ್ದು ಪಡಿಸಿದೆ. ಮಹಮದೀಯ ಕಾನೂನಿನಲ್ಲಿಯೂ ದತ್ತು ಸ್ವೀಕಾರ ಕಾನೂನು ಬಾಹಿರವಾಗಿದೆ.

ಹಿಂದೂ ಸಂಪ್ರದಾಯದಂತೆ ಕಾಶಿಯಲ್ಲಿ ಅಮೆರಿಕದ ಮುಸ್ಲಿಂ ದಂಪತಿ ವಿವಾಹ!
ಭಾರತಕ್ಕೆ ಭೇಟಿ ನೀಡಿದ ಅಮೆರಿಕ ಮೂಲದ ಯುವ ದಂಪತಿಗಳು ಭಾರತೀಯ ಸಂಸ್ಕೃತಿಯನ್ನು ಇಷ್ಟಪಟ್ಟಿದ್ದಾರೆ. ಅವರಿಬ್ಬರೂ ತ್ರಿಲೋಚನ್ ಮಹಾದೇವನ ದೇವಾಲಯದಲ್ಲಿ ಬಾಬಾ ಭೋಲೆನಾಥ್ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು.

ಗದಗ: ಮುಸ್ಲಿಂ ಕುಟುಂಬದಿಂದ ಸ್ವರೂಪನಂದ ಭಾರತಿ ಸ್ವಾಮೀಜಿ ಪಾದಪೂಜೆ
ಗದಗದ ಮುಸ್ಲಿಂ ಕುಟುಂಬವೊಂದು ಕ್ಯಾರೆಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ.

ವಿಡಿಯೋ: ರೈಲ್ವೆ ನಿಲ್ದಾಣದ ಆವರಣದಲ್ಲಿ ಮುಸ್ಲಿಂ ದಂಪತಿಗೆ ಡಿಸಿಪಿ ಅಶೋಕ್ ಕುಮಾರ್‌ರಿಂದ ಚಿತ್ರಹಿಂಸೆ!
ಡಿಸಿಪಿ ಅಶೋಕ್ ಕುಮಾರ್ ದಿಕ್ಷಿತ್ ಎಂಬುವರು ರೈಲ್ವೆ ನಿಲ್ದಾಣದದ ಆವರಣದಲ್ಲಿ ಮುಸ್ಲಿಂ ದಂಪತಿಯನ್ನು ಅಸಭ್ಯವಾಗಿ ನಿಂದಿಸಿ, ಲಾಠಿಯಿಂದ ಥಳಿಸಿ ಚಿತ್ರಹಿಂಸೆ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ...

ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂಬ ಶಂಕೆ: ರೈಲಿನಲ್ಲಿದ್ದ ಮುಸ್ಲಿಂ ದಂಪತಿಗಳ ಮೇಲೆ ಹಲ್ಲೆ
ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂಬ ಶಂಕೆ ಮೇಲೆ ಮುಸ್ಲಿಂ ದಂಪತಿಗಳ ಮೇಲೆ ಗೋರಕ್ಷ ಸಮಿತಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

